unfoldingWord 33 - ರೈತನ ಕಥೆ
ዝርዝር: Matthew 13:1-23; Mark 4:1-20; Luke 8:4-15
የስክሪፕት ቁጥር: 1233
ቋንቋ: Kannada
ታዳሚዎች: General
ዓላማ: Evangelism; Teaching
Features: Bible Stories; Paraphrase Scripture
ሁኔታ: Approved
ስክሪፕቶች ወደ ሌሎች ቋንቋዎች ለመተርጎም እና ለመቅዳት መሰረታዊ መመሪያዎች ናቸው። ለእያንዳንዱ የተለየ ባህል እና ቋንቋ እንዲረዱ እና እንዲስማሙ ለማድረግ እንደ አስፈላጊነቱ ማስተካከል አለባቸው። አንዳንድ ጥቅም ላይ የዋሉ ቃላቶች እና ጽንሰ-ሐሳቦች የበለጠ ማብራሪያ ሊፈልጉ ወይም ሊተኩ ወይም ሙሉ ለሙሉ ሊተዉ ይችላሉ.
የስክሪፕት ጽሑፍ
ಒಂದು ದಿನ ಯೇಸು ಸರೋವರದ ದಡದ ಬಳಿಯಲ್ಲಿದ್ದನು. ಆತನು ಜನರ ದೊಡ್ಡ ಗುಂಪಿಗೆ ಬೋಧಿಸುತ್ತಿದ್ದನು. ಆತನು ಬೋಧಿಸುತ್ತಿರುವುದನ್ನು ಕೇಳಿಸಿಕೊಳ್ಳಲು ಅನೇಕ ಜನರು ಬಂದರು, ಅವರೆಲ್ಲರಿಗೆ ಬೋಧಿಸಲು ಯೇಸುವಿಗೆ ಸಾಕಷ್ಟು ಸ್ಥಳಾವಕಾಶವಿರಲಿಲ್ಲ. ಆದ್ದರಿಂದ ಆತನು ನೀರಿನಲ್ಲಿದ್ದ ದೋಣಿಯನ್ನು ಹತ್ತಿ ಕುಳಿತುಕೊಂಡು, ಅಲ್ಲಿಂದ ಆತನು ಜನರಿಗೆ ಬೋಧಿಸಿದನು.
ಯೇಸು ಈ ಕಥೆಯನ್ನು ಹೇಳಿದನು. "ರೈತನು ಬಿತ್ತುವುದಕ್ಕೆ ಹೊರಟನು. ಅವನು ಕೈಯಿಂದ ಬೀಜಗಳನ್ನು ಬಿತ್ತುತ್ತಿರುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದು ಬಿಟ್ಟವು."
“ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಬಂಡೆಯ ನೆಲದಲ್ಲಿ ಬಿದ್ದ ಬೀಜಗಳು ಬೇಗ ಮೊಳೆತವು. ಆದರೆ ಅವುಗಳು ಮಣ್ಣಿನಲ್ಲಿ ಆಳವಾಗಿ ಬೇರೂರಲು ಆಗಲಿಲ್ಲ. ಸೂರ್ಯನು ಉದಯಿಸಿ ಬಿಸಿಲೇರಿದಾಗ ಆ ಸಸಿಗಳು ಬಾಡಿ ಒಣಗಿಹೋದವು.”
“ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಆ ಬೀಜಗಳು ಬೆಳೆಯಲು ಆರಂಭಿಸಿದವು, ಆದರೆ ಮುಳ್ಳುಗಿಡಗಳು ಅವುಗಳನ್ನು ಅಡಗಿಸಿಬಿಟ್ಟವು. ಆದ್ದರಿಂದ ಮುಳ್ಳುಗಿಡಗಳಲ್ಲಿ ಬಿದ್ದ ಬೀಜಗಳಿಂದ ಬೆಳೆದ ಸಸ್ಯಗಳು ಯಾವುದೇ ಫಲವನ್ನು ಕೊಡಲಿಲ್ಲ."
"ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಬೆಳೆದುಬಂದವು ಮತ್ತು ಬಿತ್ತಲ್ಪಟ್ಟಂಥ ಬೀಜಕ್ಕನುಗುಣವಾಗಿ 30, 60 ಅಥವಾ 100 ಪಟ್ಟು ಧಾನ್ಯವನ್ನು ಕೊಟ್ಟವು. ದೇವರನ್ನು ಹಿಂಬಾಲಿಸಲು ಬಯಸುವವನು, ನಾನು ಹೇಳುತ್ತಿರುವ ವಿಷಯಕ್ಕೆ ಗಮನ ಕೊಡಲಿ!" ಎಂದು ತಿಳಿಸಿದನು
ಈ ಕಥೆಯು ಶಿಷ್ಯರನ್ನು ಗೊಂದಲಕ್ಕಿಡು ಮಾಡಿತು. ಆದ್ದರಿಂದ ಯೇಸು ಅದನ್ನು ಹೀಗೆ ವಿವರಿಸಿದನು: "ಬೀಜವು ದೇವರ ವಾಕ್ಯವಾಗಿದೆ. ದೇವರ ವಾಕ್ಯವನ್ನು ಕೇಳಿ, ಅದನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯು ಕಾಲ್ದಾರಿಯಾಗಿರುವನು. ಅನಂತರ ಸೈತಾನನು ವಾಕ್ಯವನ್ನು ಅವನಿಂದ ತೆಗೆದುಹಾಕುತ್ತಾನೆ. ಅಂದರೆ ಸೈತಾನನು ಅ ವಾಕ್ಯಗಳನ್ನು ಅದನ್ನು ಅರ್ಥಮಾಡಿಕೊಳ್ಳದಂತೆ ಮಾಡುವನು ."
"ದೇವರ ವಾಕ್ಯವನ್ನು ಕೇಳಿ ಅದನ್ನು ಸಂತೋಷದಿಂದ ಸ್ವೀಕರಿಸುವಂಥ ವ್ಯಕ್ತಿಯು ಬಂಡೆಯ ನೆಲವಾಗಿರುವನು. ಆದರೆ ಅವನು ಸಂಕಟಗಳನ್ನು ಅನುಭವಿಸುವಾಗ ಅಥವಾ ಇತರ ಜನರು ಅವನನ್ನು ಹಿಂಸಿಸುವಾಗ, ಅವನು ದೇವರಿಂದ ದೂರ ಹೋಗುತ್ತಾನೆ, ಅಂದರೆ ಅವನು ದೇವರನ್ನು ನಂಬುವುದನ್ನು ನಿಲ್ಲಿಸಿಬಿಡುತ್ತಾನೆ."
"ಮುಳ್ಳುಗಿಡಗಳಿರುವ ನೆಲವನ್ನು ಸೂಚಿಸುವಂಥ ವ್ಯಕ್ತಿಯು ದೇವರ ವಾಕ್ಯವನ್ನು ಕೇಳುತ್ತಾನೆ, ಆದರೆ ಅವನು ಅನೇಕ ವಿಷಯಗಳ ಬಗ್ಗೆ ಚಿಂತಿಸುವುದಕ್ಕೆ ಪ್ರಾರಂಭಿಸುತ್ತಾನೆ, ಅವನು ಬಹಳಷ್ಟು ಹಣ ಸಂಪಾದಿಸಲು ಪ್ರಯತ್ನಿಸುತ್ತಾನೆ ಮತ್ತು ಅವನು ಅನೇಕ ವಸ್ತುಗಳನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಸ್ವಲ್ಪ ಕಾಲವಾದ ಮೇಲೆ ಅವನಿಗೆ ದೇವರನ್ನು ಪ್ರೀತಿಸಲು ಆಗುವುದಿಲ್ಲ. ಹಾಗಾಗಿ ಅವನು ದೇವರ ವಾಕ್ಯದಿಂದ ಏನನ್ನು ಕಲಿತ್ತಿದ್ದರೂ ದೇವರನ್ನು ಮೆಚ್ಚಿಸುವಂತೆ ಅವನು ನಡೆದುಕೊಳ್ಳುವುದಿಲ್ಲ . ಅವನು ಯಾವುದೇ ಧಾನ್ಯಫಲವನ್ನು ಕೊಡದಿರುವಂಥ ಗೋಧಿಯ ದಂಟುಗಳಂತೆ ಇದ್ದಾನೆ."
"ಆದರೆ ದೇವರ ವಾಕ್ಯವನ್ನು ಕೇಳಿ, ಅದನ್ನು ನಂಬಿ, ಫಲವನ್ನು ಕೊಡುವಂಥ ವ್ಯಕ್ತಿಯು ಒಳ್ಳೆಯ ನೆಲವಾಗಿರುವನು."